File size: 1,741 Bytes
b0c2634 |
1 2 |
ಇಲ್ಲಿಯ ಅವರೆನ್ನುವ ಅವರು ಬೇರೆ ಯಾರು ಆಗಿರುವುದಿಲ್ಲ ನಿಮ್ಮ ಕನಸುಗಳಿಗೆ ನೀರೆರೆದು ಜೊತೆಯಾದ ನಿಮ್ಮ ಮಾತುಗಳಲ್ಲಿ ಮಾತಾದ, ವರ್ಷಾನುವರ್ಷಗಳಿಂದಲೂ ನಿಮ್ಮ ಎಲ್ಲಾ ಭಾವನೆ, ಕಲ್ಪನೆ, ಸಾಧನೆ, ಕಷ್ಟ -ಸುಖ, ದುಃಖ-ದುಮ್ಮಾನ ಗಳ ಜೊತೆ ಬೆರೆತು ಸ್ನೇಹದ ಸೇತುವೆಯಂತಿದ್ದ ಆತ್ಮೀಯ ಗೆಳೆಯ/ಗೆಳತಿಯರೇ ಆಗಿರುತ್ತಾರೆ. ನಿಮ್ಮ ಮತ್ತು ಅವರ ನಡುವೆ ಹಿಂದೆ ಅದೆಷ್ಟೋ ಇಂತಹ ಸಣ್ಣ ಪುಟ್ಟ ಜಗಳಗಳು ಉದ್ಭವಿಸಿ ಒಂದೆರಡು ದಿನಗಳವರೆಗೆ ಮಾತು ಬಿಟ್ಟು ದೂರಾಗಿ ಮತ್ತೆ ನಿಮಗೆ ನೀವೇ ಎಲ್ಲವನ್ನು ಮರೆತು compromise ಆಗಿರುತ್ತಿರಿ, ಆದರೆ ಪ್ರತಿ ಬಾರಿಯೂ ಪ್ರತಿ ಜಗಳದ ನಂತರವೂ ಮತ್ತೆ ಒಂದಾಗುವ ಮಾತು ಬರುವುದಿಲ್ಲ, ಕೆಲವೊಂದು ಕೆಲವೊಮ್ಮೆ ಅತಿರೇಕದ ಘಟ್ಟಕ್ಕೆ ನಿಮ್ಮನ್ನು ತಲುಪಿಸಿ, ನಿಮಗೆ ತಿಳಿಯದೆ ನಿಮ್ಮಲ್ಲಿ Ego ಅನ್ನೋವ ನಂಜಿನ ಗಿಡವೊಂದು ಚಿಗುರೊಡೆದಿರುತ್ತದೆ. ಅದು ನಿಮ್ಮ ಸ್ನೇಹವನ್ನು ಮತ್ತೆ ಬೆಸೆಯಲು ಬಿಡುವುದಿಲ್ಲ. |