CoolCoder44's picture
Upload folder using huggingface_hub
94fcbe1 verified
ಕನ್ನಡ ಸಾಹಿತ್ಯ.ಕಾಂ
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
ನಿದ್ದೆ ಮಡಿಲೊಳು ದಣಿದು ಮಲಗಿಹುದು
ಜಗದ ಬಾಳು ;
ಹಗಲಿನ ಅಪಸ್ವರಗಳೆಲ್ಲ ಮೌನದಲಿ
ಮರೆತಿಹವು ನೂರಾರು ಮೇಲುಕೀಳು !
ನಿದ್ದೆ ಬಾರದೆ ನಿನಗೆ? ಬೀಳದೆಯ ಸವಿಗನಸು ?
ನೆಲದಿಂದ ಮುಗಿಲವರೆಗೂ ಚಿಮ್ಮಿ ಬರುತಿಹವೆ ಬಾಣ ಬಿರುಸು ?!
ಕತ್ತಲೆಯ ಆಳದಲಿ
ಕೊರತೆಗಳನೆಲ್ಲವನು ಹೂಳು ಹೂಳು !
* * * *
ಹರಿದು ತಿನ್ನುವ ಹದ್ದು
ತನ್ನ ಗೂಡೊಳು ಮಲಗಿ ನಿದ್ದೆಗೈದಿರುವ ಹೊತ್ತು
ಬಾನಿನೆದೆಯೊಳದಾವುದೋ ನೋವು ಮೆಲ್ಲನೆ ಹರಿದು
ಸುರುಳಿ ಸುತ್ತುತ ಕೊರಳ ಬಿಗಿಯುತಿತ್ತು ;
ಚಿಕ್ಕೆಗಣ್ಣುಗಳಿಂದ ಕಂಬನಿಗಳುರುಳುರುಳಿ
ಮಂದ ಬೆಳಕೂ ಕೂಡ ನಂದಿ ಹೋಗುತಲಿತ್ತು !
ನರನರಗಳಲ್ಲಿ ವೇದನೆ ತುಂಬಿ ತುಡಿದಂತೆ
ಗಾಳಿ ನರಳಿತ್ತು !
* * * *
ಕಣ್ದೆರೆಯುತಿದೆ ನಸುಕು
ಬಾನಬಸುರಿಂದೊಗೆದ ಕೂಸು !
ಉಷೆಯ ತಾವರೆಗೈಗಳಲ್ಲಿ ಮಿಸುಕಾಡುತಿದೆ !
ಹೊಂಬೆಳಕಿನಾನಂದ
ದಿಕ್ಕು ದಿಕ್ಕುಗಳನೊಂದೆ ತೆಕ್ಕೆಯೊಳು ಬಿಗಿದು
ಜೀವ ಜೀವದ ಹೂವ ಅರಳಿಸಿಹುದು !
ಹೂವಿನೆಸಳಿನ ಮೇಲೆ ಚಿಕ್ಕೆಗಂಬನಿ ಜಾರಿ
ಮಿರುಗುತಿದೆ ಅಮೃತಬಿಂದು!
*****
ಶಬ್ದಗಳು ಯಾತಕ್ಕೆ ಹೀಗೆ ಕಪ್ಪು ತುಂತುರು ಹನಿ! ಬಿಳಿಯ ಅವಕಾಶಕ್ಕೆ ಕೊಟ್ಟ ರೂಪ. ಶಬ್ದಗಳು ಯಾತಕ್ಕೆ ಹೀಗೆ ಕೇಳುವುದಿಲ್ಲ ಕಾಣುತ್ತವೆ, ಶಬ್ದಗಳು ಕಾಣದವೂ ಕೇಳುತ್ತವೆ. *****
ತುಳುಕು ಚಿಮ್ಮುವ ಹೊಳಪು ಸಿಗುರು ಚೀರುವ ಅರಚು ಹಿರಿದುದ್ದ ಬಳುಕಾಡಿ ತೊನೆದು ತೂರಿದ ಗುರಿ ಗರಿಮುರೀ ಬಿದಿರು ಚುಚ್ಚು ಮುಳ್ಳು. ಸಾವಿರದ ಅಲಗುಗಳ ಜೀವನದ ಕೆಚ್ಚು ಪರಂಪರೆಯ ಹುಚ್ಚು ತಿದಿಯಾರಿ ಹೊಗೆಯೆದ್ದ ಯಜ್ಞಕುಂಡ-ಪ್ರೇಮಿ ಅರೆಬರೆ […]
(೧)ಮಗುವನಾಡಿಸುತ ಹೂವಿಗೆ ಹೂವ ಪೋಣಿಸುತಜಾವ ಜಾವಕೆ ಹಾಡಿನೆಳೆಯ ಜಗ್ಗಿದುಂಡುಮಾಲೆಯ ಕನಸ ಕಟ್ಟಿ ಮುಡಿಯುತ್ತಿಹಳುಇರುಳಬಾನಿಗೆ ಚಂದ್ರ ತಾರೆಯಾಗಿ ! ನೀರು ತುಂಬಿದ ಕೆರೆಯ ಹೃದಯಾಂತರಾಳದಲಿಆ ನೀಲಿ ಆ ಮೋಡವೆಲ್ಲ ಮೂಡಿಹೇಳಬಾರದ ಹಿಗ್ಗು-ಬಾಯಿ ಬಿಟ್ಟಿತು ಮೊಗ್ಗುಯಾವುದೋ ಮಾಯೆಯಲಿ […]
ಬಿಟ್ಟ್ಯಾ
ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ…
ಟಿಪ್ಸ್ ಸುತ್ತ ಮುತ್ತ
"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ…
ಮನ್ನಿ
ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ…
ಬುಗುರಿ
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ…