|
ಕನ್ನಡ ಸಾಹಿತ್ಯ.ಕಾಂ
|
|
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
|
|
ಎಂದು ಇಲ್ಲದ ವಿರಸವಿಂದು ಕೂರಸಿಯಾಗಿ
|
|
ಮಾತು ಮಾತಿನ ಮೊನೆಯ ಮಸೆಯಿತೆಂತು?
|
|
ನಿನ್ನೆದೆಯ ಸಂತಾಪವಿಂತು ಹರಿಯಿತೆ ಪಾಪ!
|
|
ಮೌನದೇವತೆ ಶಾಪವಿತ್ತಳೆಂತು?
|
|
ಜಗದ ವ್ಯವಹಾರಿಕತೆಗೇಕೆ ವ್ಯಥೆ ಕಿಂಕರತೆ?
|
|
ಪ್ರೀತಿ ಅಂತಃಕರಣ ನಿನ್ನದಿದೆಕೊ!
|
|
ಅದನುಳಿದರೇನುಂಟು? ಬರಿಯ ಗಾಳಿಯ ಗಂಟು!
|
|
ತೆರೆದ ಹೃಯದೊಳದನೆ ಬರಮಾಡಿಕೊ!
|
|
ಬಿಡಿಸಿದಷ್ಟೂ ಬಾಳು ಬರಿ ಗುಂಜು ತೊಡಕು
|
|
ಕಂಡಕಂಡೆಡೆಯಲ್ಲಿ ಕರುಣೆಯನೆ ಹುಡುಕು;
|
|
ಅವರಿವರ ಅಲ್ಪತನಕಿನ್ನೇನು ಬೇಕು?
|
|
ನಿನ್ನ ನೋವಿಗೆ ನಿನ್ನ ಕಂಬನಿಯೆ ಸಾಕು!
|
|
*****
|
|
ಕಲ್ಲು ಕೂತ ಮಂಪಗಳ ಮೇಲೆ ಚಿತ್ತಾರಗಳ ಎಣಿಸುತ್ತ ಕನಸ ಚಿಲಿಪಿಲಿ ಗುಟ್ಟುವ ಗಿಳಿಗಳಾಡುವ ಮಾತು- ‘ನಾವು ರಾಯನ ಅರಸಿಯರು ಅರಸುತ್ತಿದ್ದೇವೆ ಅರಸೊತ್ತಿಗೆಯ ವೈಭವ, ಕಳೆದುಹೋದ ಪೀತಾಂಬರ ಮಕರಿಕಾ ಪತ್ರದ ಮೇಲೆ ರಾಯ ತಾನೇ ಬರೆದ […]
|
|
ಪ್ರೇತ ಅಗೋಚರ, ಅಗಮ್ಯವಲ್ಲಕಲ್ಪನೆಗಾದರೂ ಸಿಗತ್ತೆ ಅದುಆದರೆ ಈ ಕಾಳ ಬೆಕ್ಕಿನ ನುಣುಪಾದ ಮೈಯಲ್ಲಿಎಷ್ಟೇ ನಿಟ್ಟಿಸಿ ನೋಡು, ದೃಷ್ಟಿಕುರುಹಿಲ್ಲದಂತೆ ಕುಸಿದು ಬಿಡುವುದು. ಕತ್ತಲೆಯಲ್ಲಿ ವೃಥಾ ಅಲೆಯುವ ಹುಚ್ಚುತಲೆಹಚ್ಚಿ ಚಚ್ಚಿ ತನ್ನ ರೋಷ ಕಳಕೊಂಡಂತೆಸುಸ್ತಲ್ಲಿ ಸಾಂತ್ವನ, ನಿನಗೆ. […]
|
|
ಈ ಜುಲೈ ತಿಂಗಳ ಜಿಟಿ ಜಿಟಿ ಮಳೆ – ಗಟಗಟ ಕುಡಿದು ಧುತ್ತೆಂದು ಬೆಳೆದು ನಿಂತಿದೆ ಹುಲ್ಲು. ಎಲ್ಲಾದರೂ ಸ್ವಲ್ಪ ಪಡುವು ಸಿಕ್ಕರೆ ಸಾಕು : ಸಿಮೆಂಟುಗೋಡೆಯ ಬಿರುಕು, ಟಾರುಬೀದಿಯ ಒಡಕು – ಎಂಥ […]
|
|
ಬಿಟ್ಟ್ಯಾ
|
|
ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ…
|
|
ಟಿಪ್ಸ್ ಸುತ್ತ ಮುತ್ತ
|
|
"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ…
|
|
ಮನ್ನಿ
|
|
ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ…
|
|
ಬುಗುರಿ
|
|
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… |