CoolCoder44's picture
Upload folder using huggingface_hub
94fcbe1 verified
ಕನ್ನಡ ಸಾಹಿತ್ಯ.ಕಾಂ
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
ಈ ದಿನ ಭಾನುವಾರ-
ಹರಿವ ಹೊಳೆ ತಟ್ಟನೆ ನಿಂತು ಮಡುವಾಗಿ
ನನ್ನ ದಡದಲ್ಲಿರುವ ಗಿಡಮರ ಬಳ್ಳಿ
ಪ್ರತಿಫಲಿಸಿ,
ಏನೋ ಸಮಾಧಾನ.
ಅಂಥ ಅವಸರವಿಲ್ಲ,
ಬೆಳಗಿನ ನಿದ್ದೆಗಿನ್ನೊಂದಿಷ್ಟು ವಿಸ್ತರಣೆ
ಕೊಡಬಹುದು.
ಬೆಳೆದಿರುವ ಗಡ್ಡ ಇನ್ನೂ ಒಂದೆರಡು ತಾಸು
ಕಾಯಬಹುದು.
ಈ ಒಂದು ದಿನವಾದರೂ
ಬರುವ ಹೋಗುವ ಅವಸರದ ಹೆಜ್ಜೆಗಳ,
ಬೆಳೆವ ಕ್ಯೂ ಬಾಲಗಳ, ಉರುಳು ಗಾಲಿಗಳ,
ಫೋನುಗಳ, ಫೈಲುಗಳ ರಗಳೆಯಿಲ್ಲದ ಹಾಗೆ
ಬಿದ್ದಲ್ಲೇ ಬಿದ್ದು ನಾನೇ ನಾನಾಗಬಹುದು.
ಈ ನಾನು
ಪರಕ್ಕೆ ಟಿಕೆಟ್ಟು ತೆಗೆದಿರಿಸಿ
ಇಹದ ವೆಯಿಟಿಂಗ್ ರೂಮಿನಲ್ಲಿ
ರೈಲಿಗೆ ಕಾಯುತ್ತಿಲ್ಲ.
ನನ್ನ ಉದ್ಧಾರಕ್ಕೆ
ಯಾವ ದೇವರಿಗೂ ಲಂಚ ಕೊಡಬೇಕಾಗಿಲ್ಲ.
ಸಾಧ್ಯವಾದಷ್ಟು ಈ ಬೀದಿಗಳ ಮೇಲೆ
ನನ್ನ ಗಾಲಿಗಳನ್ನು ಉಜ್ಜಿ ಸವೆಸಿದ್ದೇವೆ;
ಈ ಒಂದು ದಿನ, ನಿಂತ ಗಾಲಿಗಳ ಕೀಲುಗಳಿಗೊಂದಿಷ್ಟು
ಎಣ್ಣೆ ಹೊಯ್ಯುತ್ತೇನೆ.
ಎಂಥ ಸೊಗಸಾಗಿದೆ ಕಿಟಕಿಯಾಚೆಗೆ
ನೀಲಿಯಲ್ಲಿ ತೆಳ್ಳಗೆ ತೇಲುವ ಮೋಡ,
ಕೆಳಗೆ ಒಂದೇ ಗುಡ್ಡ, ಗುಡ್ಡದ ಮೇಲೆ
ತಲೆಗೆದರಿ ನಿಂತ ಒಂದೇ ಮರ.
ಎಲ್ಲವೂ ರಜಾ ತೆಗೆದುಕೊಂಡಂತಿದೆ
ಈ ವಿರಾಮ!
ಇಂಥ ಭಾನುವಾರದ ಒಂದು ಕ್ಷಣವನ್ನೆ
ನಿತ್ಯವಾಗಿಸಿಕೊಂಡಿರಬಹುದೆ
ಸಂತ-ಸಿದ್ಧರ ಮನಸ್ಸು?
ಹಾಗೆ ನೋಡಿದರೆ, ಈ ಒಂದು ಕ್ಷಣ
ನಾನು ಒಬ್ಬ ಸಿದ್ಧ
ಅಥವಾ ಸ್ವಲ್ಪ ಕೆಳಗಿನ ಬುದ್ಧ!
*****
– ೧ – ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣ ವನದ ತೇಗ, ಗಂಧ ತರುಗಳಲ್ಲಿ – ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ. – ೨ […]
೧ ಒಂದರಗಳಿಗೆಯ ಬಂಧುರ ಸ್ಪರ್‍ಶಕೆ ಮಂದಾನಿಲನೈತಂದಿಹನು; ಹಗಲಿನ ಬಿಸಿಲಿಗೆ ಮಾಗಿದ ಬನಗಳ ಫಲಗಳ ಸೊಂಪಿನಲೀಜಿಹನು. ೨ ರವಿಯದೊ ಬಿದ್ದನು! ಕವಿಯಿದೊ ಎದ್ದನು ತಂಗಾಳಿಯ ಜತೆ ಕೇಳಿಯಲಿ- ನೀಲಾಂಗಣದಲಿ ಮೋಡದ ಪುತ್ಥಳಿ ತೂಕಡಿಸುತ್ತಿರೆ ನಿದ್ದೆಯಲಿ. ೩ […]
ಅನ್ಯಮನಸ್ಕನಾಗಿ ಬೆಳಗಿನ ಝಾವ ಗೇಟ್ ತೆರೆದು ಎಂದಿನಂತೆ ಒಳಬರುವಾಗ ಮನೆಯೊರಸಿ, ರಂಗೋಲೆಹಾಕಿ ಮುಂಭಾಗ ಓರಣಗೊಳಿಸಿ ಸುಸ್ತಾದ ಹೆಂಡತಿ ಕಾಲೊರೆಸಿಕೊಂಡು ಒಳಗೆ ಬನ್ನಿ ಎನ್ನುತ್ತಾಳೆ. ಎಂದಿನಂತೆ ಫುಟ್ ರಗ್ಗಿನ ಮೇಲೆ ಕಾಲೊರೆಸಿಕೊಳ್ಳುವುದು ರಗ್ಗಿಗೆ ಪಾದ ಜುಲುಮೆಯಲ್ಲಿ […]
ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ
ಟಿಪ್ಪಣಿ *
ಹೆಸರು *
ಮಿಂಚೆ *
ಜಾಲತಾಣ
ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ.
This site uses Akismet to reduce spam. Learn how your comment data is processed.
ಬಿಟ್ಟ್ಯಾ
ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ…
ಟಿಪ್ಸ್ ಸುತ್ತ ಮುತ್ತ
"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ…
ಮನ್ನಿ
ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ…
ಬುಗುರಿ
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ…