CoolCoder44's picture
Upload folder using huggingface_hub
94fcbe1 verified
ಕನ್ನಡ ಸಾಹಿತ್ಯ.ಕಾಂ
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
ಯಾವ ಋತುವಿನೊಳಿಂತು ಕನಸು ಕಂಡಳೊ ಪೃಥಿವಿ
ಆಶೆ ಬೀಜಗಳೆನಿತೊ ಮಡಿಲೊಳಿರಿಸಿ
ಮಳೆಯ ರೂಪದಿ ಮುಗಿಲು ಮುತ್ತಿಡಲು ಮತ್ತೇರಿ
ಹೊತ್ತು ನಿಂತಿಹಳಮಿತ ವೃಕ್ಷರಾಶಿ.
ಮಾವು ಬೇವೂ ತೆಂಗು ಕೌಂಗು ನೇರಿಳೆ ಹಲಸು
ಹುಣಿಸೆ ಹುಲುಗಲ ತಾಳೆ ಬಾಳೆಯಂತೆ
ಮಾಧವಿ ತಮಾಲ ಮಾಲತಿ ಹೊಂಗೆ ಶ್ರೀಗಂಧ
ಸೀತಾಳಿ ಬಕುಳ ಸಂಪಿಗೆಗಳಂತೆ!
ದೇವಕನ್ನೆಯರಿಳೆಗೆ ಇಳಿತಂದು ಗುಟ್ಟಿನಲಿ
ತೊಟ್ಟಿಲವ ತೂಗಿ ಹೆಸರಿಟ್ಟರೇನೊ!
ಹೆಸರಿಲ್ಲದೆಯು ಹಸಿರ ಚಿಮ್ಮಿಸುವ ಪಸದನಕೆ
ಜುಮ್ಮೆಂದು ಮನಸೋತು ಬಿಟ್ಟರೇನೊ!
ಇಲ್ಲಿ ಬಣ್ಣದ ತಳಿರ ತುಟಿಯಲ್ಲಿ ಹೂನಗೆಯು
ಅಲ್ಲಿ ಹಣ್ಣಿನ ಗೊನೆಗೆ ಗಿಣಿಗಳೆರಡು
ಸೀಳುದಾರಿಯ ಬದಿಗೆ ಸಾಲು ಮರಗಳ ನೆಳಲು
ಗಾಳಿಯೂದುವ ಕೊಳಲು-ಹಕ್ಕಿ ಹಾಡು,
ಜಗದ ನೂರೆಂಟು ತರ ಕಲಹ ಕಂಟಕಗಳಿಗೆ
ತಾವು ಕಾರಣವಲ್ಲವೆಂಬ ಹಾಗೆ
ಹುಲ್ಲು ಮೇಯುವ ಹಸುಗಳಲ್ಲಿ ಮೆಲುಕಾಡಿಸಿವೆ
ಹುಲ್ಲುಗದ್ದೆಯೆ ತಮ್ಮದೆಂಬ ಹಾಗೆ,
ನಳಲ ಸೆರಗನು ಹಿಡಿದು ಬಿಸಿಲು ಮುಂದೋಡುತಿದೆ
ದೂರ ದೂರದ ತನ್ನ ಮನೆಯ ನೆನೆದು,
ಬಿಳಿಯ ಮೋಡವದೊಂದು ಬೆಟ್ಟದುದಿಯಲಿ ನಿಂದು
ಎಲ್ಲ ಬಲ್ಲವರಂತೆ ಸುಮ್ಮನಿಹುದು.
ಬಾಳ ಬಿಸಿಲಲಿ ಬಳಲಿ ದಣಿದು ಬಂದಿಹ ಪಥಿಕ
ಮರದ ತಣ್ಣೆಳಲೊಂದೆ ನಿನಗಾಸರು-
ಇಲ್ಲಿ ದಣಿವಾರಿ ಮನ ಶಾಂತಿ ಸಂತಸ ಪಡೆಯೆ
ಮುಂದೆ ನಡೆಯುವ ದಾರಿ ಎನಿತು ಹಗುರು!
ಪ್ರಕೃತಿ ತನ್ನೆದೆಯ ಮಧುವಾಟಿಕೆಯ ತೆರೆದಿರಲು
ಅದನು ತಣಿ ಹೀರದೆಯೆ ಸಾಗಬಹುದೆ?
ಯಾರಿಗೀ ಸುಂದರತೆ? ಯಾರಿಗೀ ಪರವಶತೆ?
ಯಾರ ಸುಖಕೀ ಸೃಷ್ಟಿ ನಿನಗಲ್ಲದೆ?
*****
‘ನಾ’ ‘ನೀ’ ಎಂದು ಹಿಗ್ಗಿ, ನುಗ್ಗಿ ಬರುತ್ತಿದ್ದ ನನ್ನ ಅಂತಃಕರಣದ ಮುಗ್ಧ ಸ್ನಿಗ್ಧ ಶಬ್ಧಗಳೆ, ಶೂನ್ಯಕ್ಕೆ ಕೊಂಬುಕೊಟ್ಟು, ಜಗ್ಗಿ ಕೆಳಗಿಳಿಸಿದಿ ‘ರಾ’? ಮ ‘ಮ’ಕಾರಕ್ಕೆ ಈಡಾಗಿ ಕಲ್ಲು ಇಟ್ಟಿಗೆ ನಡುವೆ ಎದೆಯ ಸೊಲ್ಲಡಗಿ ಕಣ್ಣುಪಟ್ಟಿಯ […]
ಸಂಜೆವೆಣ್ಣಿನ ಸಕಲ ಸೌಭಾಗ್ಯ ಹೊಮ್ಮುತಿದೆ! ಕಿಂಜಲ್ಕ ಕುಸುಮಗಳ ಹುಡಿಯ ಹಾರಿಸಿದಂತೆ ಕೆಂಕಮಾಗಿದೆ ಬಾನು; ಕಿತ್ತಿಳೆಯ ತೊಳೆಯಂತೆ ಕ್ಷಿತಿಜದಂಚಿನ ತುಟಿಗೆ ರಾಗ ರಂಗೇರುತಿದೆ! ಮುಂಗುರುಳು ಚಿನ್ನಾಟವಾಡಿದೊಲು ಮುಚ್ಚಂಜೆ ಕರಿನರಳ ಚಾಚಿಹುದು. ನೀಲ ಸೀಮಂತದಲಿ ಒಂದೊ ಎರಡೋ […]
(ಲೋಂಡಾದಿಂದ ಗೋವಾಕ್ಕೆ ಹೋಗುವ ಮಾರ್ಗದಲ್ಲಿ ಕಾಣಸಿಗುವ ದೂಧ್ ಸಾಗರ್ ಜಲಪಾತದ ನೋಟ ಮನೋಹರ. ಆಕಾಶದಿಂದ ಧುಮ್ಮಿಕ್ಕುವ ಹಾಲಿನ ಹೊಳೆಯಂತೆ ಕಾಣುವ ಇದರೆದುರು ನಿಂತಾಗ….) ಕ್ಷೀರ ಸಾಗರವ ಸುಮನಸ ವೃಂದ ಬಾನಿಂ ಕಟ್ಟಿರೆ ಸಡಲಿತೆ ಬಂಧ? […]
ಬಿಟ್ಟ್ಯಾ
ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ…
ಟಿಪ್ಸ್ ಸುತ್ತ ಮುತ್ತ
"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ…
ಮನ್ನಿ
ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ…
ಬುಗುರಿ
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ…