review
stringclasses 9
values | review_length
int64 32
115
|
|---|---|
ಮೊದಲು 93 ವರ್ಷದ ಪತಿಗೆ ತೀವ್ರ ಕೆಮ್ಮು, ಎದನೋವು ಹಾಗು ಮೂತ್ರನಾಳದ ಸೋಂಕು ಕಂಡುಬಂದಿದ್ದು, ಜೊತೆಗೆ ಹೃದಯದ ಸಮಸ್ಯೆಯು ಉಂಟಾದ್ದರಿಂದ ಅವರನ್ನು ವೆಂಟಿಲೇಟರ್ ನಲ್ಲಿಡಲಾಗಿತ್ತು. ಅದರ ಬೆನ್ನಿಗೆ ಪತ್ನಿಯೂ ತೀವ್ರ ಅನಾರೋಗ್ಯಕ್ಕೀಡಾದರು. ಆದರೆ ಈ ದಂಪತಿಯನ್ನು ರಕ್ಷಿಸಲು ಸಾಧ್ಯವಿರುವ ಎಲ್ಲಾ ಚಿಕಿತ್ಸೆ ನೀಡಬೇಕು ಎಂದು ಅರೋಗ್ಯ ಸಚಿವೆ ಶೈಲಜಾ ಅವರು ಸೂಚನೆ ನೀಡಿದ್ದರು.
| 38
|
ಚಿರಿಕಹುಆ ಸೋದರ ಸಂಬಂಧಿಗಳ ಸಂತತಿಯನ್ನು ರಕ್ತಸಂಬಂಧಿ ಪದಗಳಿಂದ ಪ್ರತ್ಯೇಕಿಸಿಲ್ಲ. ಹೀಗಾಗಿ ಒಂದೇ ಪದವನ್ನು ಸಂತತಿಗಾಗಲಿ ಅಥವಾ ಸೋದರ ಸಂಬಂಧಿಗಾಗಲಿ ಬಳಸುತ್ತಾರೆ. ( ಸಮಾನಾಂತರ ಸೋದರ ಸಂಬಂಧಿಗೆ ಮತ್ತು ಅಡ್ಡ ಸಂಬಂಧದ ಸೋದರ ಸಂಬಂಧಿಗಳಿಗೆ ಕರೆಯುವುದಕ್ಕೆ ಪ್ರತ್ಯೇಕ ಪದಗಳು ಇಲ್ಲ.) ಇದಲ್ಲದೆ ಪದಗಳನ್ನು ಮಾತನಾಡುವವನ ಲಿಂಗಕ್ಕೆ ಅನುಗುಣವಾಗಿ ಬಳಸುತ್ತಾರೆ. (ಇಂಗ್ಲಿಷ್ ಪದಗಳಾದ ಸಹೋದರ ಮತ್ತು ಸಹೋದರಿ ಯಂತೆ ಅಲ್ಲ) -kʼis(ಕಿಸ್) ಇದೇ ರೀತಿಯ- ಲಿಂಗ ಸಂತಾನ ಅಥವಾ ಅದೇ ರೀತಿಯ ಲಿಂಗದ ಸಹೋದರ ಸಂಬಂಧಿಗಳು, -´-ląh (ಅಹ್) ವಿರುದ್ಧ ಲಿಂಗದ ಸಂತಾನ ವಿರುದ್ಧ ಲಿಂಗದ ಸಹೋದರ ಸಂಬಂಧಿ. ಇದರರ್ಥ ಒಬ್ಬ ಗಂಡಸು ಇದ್ದರೆ ಆತನ ಸಹೋದರನನ್ನು -kʼis ಕಿಸ್ ಎಂದು ಮತ್ತು ಆ ಒಬ್ಬ ಗಂಡಸಿನ ಸಹೋದರಿಯನ್ನು -´-ląh-`-ಅಹ್ ಎಂದು ಕರೆಯುವರು. ಒಬ್ಬಳು ಮಹಿಳೆಯಾಗಿದ್ದರೆ ಆಗ ಅವಳ ಸಹೋದರನನ್ನು -´-ląh ಅಹ್ ಎಂದು ಮತ್ತು ಅವಳ ಸಹೋದರಿಯನ್ನು -kʼis -ಕಿಸ್ ಎಂದು ಕರೆಯಲಾಗುವುದು. ಚಿರಿಕಹುಆ ಅಹ್ ಸಂಬಂಧದಲ್ಲಿ ಸಂಬಂಧಿ ಮತ್ತು ಸಹೋದರ ಸಂಬಂಧಿಗಳ ಬಗ್ಗೆ ಅತಿಯಾದ ನಿರ್ಬಂಧಮತ್ತು ಗೌರವಗಳಿವೆ. (ಆದರೆ ಸಂತತಿಯವರ ಬಗ್ಗೆಯಲ್ಲ). ಅಹ್ ಸಂಬಂಧದಲ್ಲಿ ಸಂಪೂರ್ಣ ಪರಿತ್ಯಾಗ ದ ಪದ್ಧತಿ ಇದೆ.
| 115
|
ನಾವು ಮಡಕಶಿರಾ ಕಡೆಯಿಂದ ಬಂದೀದೀವಿ, ಬಸ್ಸಿನೊಳಗೆ ಯಾರೋ ಒಬ್ಬ ನನ್ ಹೆಂಡ್ತಿ ಬ್ಯಾಗು ಕಿತ್ಕೊಂಡು ಹೋಗ್ಬಿಟ್ಟ, ನಮ್ಮ ದುಡ್ಡೆಲ್ಲ ಅದ್ರಲ್ಲೇ ಇತ್ತು ಸಾರ್. ಡ್ರೈವರ್ ಏನೋ ಕರುಣೆ ತೋರಿ ಹತ್ತು ರೂಪಾಯಿ ಕೊಟ್ಟು ಕಳ್ಸಿದ್ರು ಸರ್. ಜೊತೇಲಿ ಹೆಣ್ ಹೆಂಗ್ಸು ಬೇರೆ ಇದಾಳೆ. ವಾಪಸ್ ಊರಿಗೆ ಹೋಗೋ ಮನ್ಸಿಲ್ಲ, ದುಡ್ಡೂ ಇಲ್ಲ. ಇಲ್ಲಿಂದ ಕೇರಳದ ತಿರುನೆಲ್ಲಿ ಹೋಗ್ಬೇಕು, ನೀವು ದೊಡ್ ಮನ್ಸು ಮಾಡಿ ಸಹಾಯ ಮಾಡಿ ಸರ್. ನಮ್ಗೆ ಹುಟ್ಟೋ ಕೂಸಿಗೆ ನಿಮ್ಮೆಸ್ರೇ ಇಟ್ಬಿಡ್ತೀವಿ.
| 53
|
ಒತ್ತಾಯ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಪ್ರತಿ ದಿನ ಕನಿಷ್ಠ ಒಂದು ಸಾವಿರಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೂಲಭೂತವಾಗಿ ಅವಶ್ಯ ಇರುವ ಶೌಚಾಲಯ, ಕುಡಿಯುವ ನೀರು, ಪ್ರಯಾಣಿಕರು ಕುಳಿತುಕೊಳ್ಳಲು ಕುರ್ಚಿಗಳ ಕೊರತೆ ಇದೆ. ಈ ಬಗ್ಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಗಮನಹರಿಸಿ, ನಿಲ್ದಾಣಕ್ಕೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
| 39
|
ಬೆಳಗಾವಿಯ ಜ್ಯೋತಿ ಪಪೂ ಕಾಲೇಜಿನಲ್ಲಿ ದ್ವಿತೀಯ ಪಿಯು ಮುಗಿಸಿರುವ ನಿಶಾನ್ ಕದಮ ಎರಡು ವರ್ಷಗಳಿಂದ ನಗರದ ಎಂ.ಜಿ. ನ್ಪೋರ್ಟಿಂಗ್ ಅಕಾಡೆಮಿಯಲ್ಲಿ ಬಾಕ್ಸಿಂಗ್ ತರಬೇತಿ ಪಡೆಯುತ್ತಿದ್ದಾನೆ. ನಿಶಾನ್‌ನನ್ನು ಮೊದಲು ಭಜನಾ ಮಂಡಳಕ್ಕೆ ಸೇರಿಸಲಾಗಿತ್ತು. ಅದರಲ್ಲಿ ಆಸಕ್ತಿ ಇಲ್ಲದ್ದಕ್ಕೆ ಬಿಟ್ಟು ಬಂದಿದ್ದನು. ಬಳಿಕ ಟಿವಿಯಲ್ಲಿ ಬಾಕ್ಸಿಂಗ್ ನೋಡುವ ಹವ್ಯಾಸ ಬೆಳೆಸಿಕೊಂಡು ಬಾಕ್ಸಿಂಗ್‌ನಲ್ಲಿಯೇ ಮುಂದುವರಿದು ಅಕಾಡೆಮಿಗೆ ಸೇರಿಕೊಂಡನು. ನಿತ್ಯ 30 ಕಿ.ಮೀ. ಓಟ ಹಾಗೂ ಸೈಕ್ಲಿಂಗ್ ಮಾಡುತ್ತಿದ್ದನು ಎಂದು ನಿಶಾನ್‌ನ ತಂದೆ ಮನೋಹರ ಹೇಳಿದರು.
| 50
|
ಈ ಪ್ರಸಿದ್ಧ ಸ್ಥಳಗಳಿಗೆ ಹೆಚ್ಚುವರಿಯಾಗಿ, ಪೆರು, ಕೋಸ್ಟಾ ರಿಕಾ ಮತ್ತು ಈಕ್ವೆಡಾರ್ಗಳಂತಹ ಉಷ್ಣವಲಯದ ಸ್ಥಳಗಳಲ್ಲಿ ಅತ್ಯಂತ ಬೃಹತ್-ಆಧಾರಿತ ವಸತಿಗೃಹಗಳು ಹಮ್ಮಿಂಗ್ ಬರ್ಡ್ಸ್ ನೋಡಲು ಉತ್ತಮ ಸ್ಥಳಗಳಾಗಿವೆ. ಈ ಪಕ್ಷಿಗಳ ಹಿಡಿತ ಮತ್ತು ಅವಿಟರಿಸಂನ ಆರ್ಥಿಕ ಪ್ರಾಮುಖ್ಯತೆಗಳನ್ನು ಅರ್ಥಮಾಡಿಕೊಳ್ಳುವುದನ್ನು ಅರ್ಥಮಾಡಿಕೊಳ್ಳುವ ಮೂಲಕ, ಅನೇಕ ಸ್ಥಳಗಳು ಮಕರಂದ ಹುಳವನ್ನು ತುಂಬಿವೆ ಮತ್ತು ಹಕ್ಕಿಗಳು ತಮ್ಮ ಜೀವನದ ಪಟ್ಟಿಗೆ ಹಮ್ಮಿಂಗ್ ಬರ್ಡ್ಸ್ ಅನ್ನು ಸೇರಿಸುವುದಕ್ಕಾಗಿ ಪ್ರದೇಶಗಳನ್ನು ಸಿದ್ಧಪಡಿಸಲು ಸಿದ್ಧವಾಗಿವೆ. ಹಲವಾರು ಸಮುದಾಯಗಳು ಹಮ್ಮಿಂಗ್ಬರ್ಡ್ ಉತ್ಸವಗಳನ್ನು ಕೂಡಾ ಉತ್ತಮ ವೀಕ್ಷಣೆಗೆ ಅನುಕೂಲವಾಗುವಂತೆ ಯೋಜಿಸುತ್ತವೆ, ಮತ್ತು ಹೆಚ್ಚಿನ ಹಮ್ಮಿಂಗ್ ಬರ್ಡ್ಸ್ ಅನ್ನು ನೋಡಲು ಪಕ್ಷಿಗಳಿಗೆ ಪ್ರಮುಖ ಘಟನೆಗಳು ಆ ಘಟನೆಗಳಾಗಿವೆ.
| 66
|
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಕನಿಷ್ಠ 10 ಕೋಟಿ ಯುವಕರಿಗೆ ಕೆಲಸ ಸಿಕ್ಕಿಲ್ಲ ಅಥವಾ ಅವರಿಗೆ ಉತ್ತಮವಲ್ಲದ ಕೆಲಸಗಳು ದೊರೆತಿವೆ. ಹತ್ತು ವರ್ಷಗಳಿಂದ ಪ್ರತಿ ವರ್ಷ 4.4 ಕೋಟಿ ಯುವಕರು ಕೆಲಸ ಮಾಡುವ ವಯಸ್ಸಿಗೆ ಬರುತ್ತಿದ್ದಾರೆ. ಇವರಲ್ಲಿ ಶೇಕಡ 30ರಷ್ಟು ಜನ ಕೃಷಿಯತ್ತ ಮುಖ ಮಾಡಬಹುದು. ಅಂದರೆ ನಾವು ಪ್ರತಿ ವರ್ಷ 1.7 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು. ಆದರೆ ನಾವು ಪ್ರತಿವರ್ಷ 55 ಲಕ್ಷದಿಂದ 60 ಲಕ್ಷ ಯುವಕರಿಗೆ ಮಾತ್ರ ಉದ್ಯೋಗ ಸೃಷ್ಟಿಸುತ್ತಿದ್ದೇವೆ. ಅಂದರೆ ಹತ್ತು ವರ್ಷಗಳಿಂದ, ಪ್ರತಿವರ್ಷ ಒಂದು ಕೋಟಿ ಯುವಕರಿಗೆ ಒಳ್ಳೆಯ ಉದ್ಯೋಗ ಸಿಕ್ಕಿಲ್ಲ ಅಥವಾ ಕಡಿಮೆ ವೇತನದ ಕೆಲಸಗಳು ಸಿಕ್ಕಿವೆ. ಮುಂದಿನ ಹತ್ತು ವರ್ಷಗಳವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ. 2025ರ ವೇಳೆಗೆ ಭಾರತದಲ್ಲಿ ಉತ್ತಮ ಕೆಲಸ ಇಲ್ಲದ ಅಥವಾ ಕಡಿಮೆ ಸಂಬಳದ ಕೆಲಸ ಪಡೆದ 20 ಕೋಟಿ ಯುವಕರು (21 ರಿಂದ 45 ವರ್ಷ ವಯಸ್ಸಿನವರು) ಇರಲಿದ್ದಾರೆ.
| 95
|
ಬಂಟ್ವಾಳ ತಾಲ್ಲೂಕಿನ ಬಡ್ಡಕಟ್ಟೆ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮೀಜಿ ಭಜನಾ ಮಂದಿರದಲ್ಲಿ ಮಂಗಳವಾರ ನಡೆದ ಗುರುಪೂಣರ್ಿಮೆ ಮತ್ತು ಶ್ರೀ ನಿತ್ಯಾನಂದ ಸ್ವಾಮೀಜಿ ಅವರ 58ನೇ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಅಪಾರ ಮಂದಿ ಭಕ್ತರು ಪಾಲ್ಗೊಂಡರು. ಆಡಳಿತ ಟ್ರಸ್ಟಿ ಬಿ.ಯೋಗೀಶ ಸಪಲ್ಯ ಮತ್ತಿತರರು ಇದ್ದರು.
| 32
|
ನಂಜನಗೂಡಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಮೈಸೂರು. ಇದು ನಂಜನಗೂಡಿನಿಂದ ಸುಮಾರು 23 ಕಿ.ಮೀ ದೂರದಲ್ಲಿದೆ. ಇಲ್ಲಿಂದ ನೀವು ಟ್ಯಾಕ್ಸಿ ಇಲ್ಲವೇ ಬಸ್ ಮೂಲಕ ನಂಜನಗೂಡನ್ನು ತಲುಪಬಹುದು. ಇನ್ನು ನೀವು ರೈಲಿನಲ್ಲಿ ಪ್ರಯಾಣಿಸುವುದಾದರೆ ನಂಜನಗೂಡು ರೈಲು ನಿಲ್ದಾಣವನ್ನು ಹೊಂದಿದೆ ಮತ್ತು ಮೈಸೂರಿಗೆ ಹಲವಾರು ರೈಲುಗಳು ಲಭ್ಯವಿದೆ. ಈ ಪಟ್ಟಣವನ್ನು ರಸ್ತೆ ಮೂಲಕ ತಲುಪಬಹುದು. ಇದು ಬೆಂಗಳೂರಿನಿಂದ 163 ಕಿ.ಮೀ ಮತ್ತು ಮೈಸೂರಿನಿಂದ 23 ಕಿ.ಮೀ.ದೂರದಲ್ಲಿದೆ. ಮೈಸೂರು ಮತ್ತು ಚಾಮರಾಜನಗರದಿಂದ ಅನೇಕ ಬಸ್ಸುಗಳು ಲಭ್ಯವಿದೆ.
| 51
|
- Downloads last month
- 1